It has been a mammoth task for director Prashanth Neel, handling a 600-member crew for KGF and seeing its sets (costing crores) being destroyed by unexpected rains.
೬೦೦ ಜನರ ಚಿತ್ರತಂಡವನ್ನು ನಿಭಾಯಿಸುತ್ತಿರುವ 'ಕೆಜಿಎಫ್' ಸಿನೆಮಾದ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರೀಕರಣಕ್ಕಾಗಿ ಹಾಕಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸಿನೆಮಾ ಸೆಟ್ ಅನಿರೀಕ್ಷಿತ ಭಾರಿ ಮಳೆಯಿಂದ ಧ್ವಂಸಗೊಂಡಿದ್ದರೂ ಎದೆಗುಂದಿಲ್ಲ. ಮತ್ತೆ ಸೆಟ್ ಎದ್ದುನಿಂತಿದ್ದು, ನಿಗದಿಯಂತೆ ಚಿತ್ರೀಕರಣ ಅಬಾಧಿತವಾಗಿ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಕನ್ನಡ ಚಿತ್ರರಂಗದ ಅತಿ ದೊಡ್ಡ ಬಜೆಟ್ ಚಿತ್ರ ಇದು ಎಂದು ಬಣ್ಣಿಸಲಾಗಿರುವ 'ಕೆಜಿಎಫ್' ೫೦% ಚಿತ್ರೀಕರಣ ಮುಗಿಸಿದೆ. ಈ ಸಿನೆಮಾಗೆ ಭದ್ರತಾ ವಿಮೆ ಇದೆಯಾದರೂ, ಅದು ಬಹುತೇಕ ಚಿತ್ರೀಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಅಪಾಯಗೊಂಡಾಗ ಬಳಸವಂತದ್ದು.
"ಎಲ್ಲರ ಜೀವಕ್ಕೆ ಬಹಳ ಬೆಲೆ ನೀಡುತ್ತಾರೆ ನಿರ್ಮಾಪಕರು" ಎನ್ನುವ ನಿರ್ಮಾಣ ತಂಡದ ಸದಸ್ಯರೊಬ್ಬರು "ಚಿತ್ರೀಕರಣದ ವೇಳೆ ಯಾರಿಗೂ ಅಪಾಯವಾಗದಂತೆ ಅವರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಕೆಜಿಎಫ್ ನಲ್ಲಿ ಬೀಡುಬಿಟ್ಟರುವ ಚಿತ್ರತಂಡಕ್ಕೆ ಎಲ್ಲ ಮೂಲಭೂತ ಸೌಕರ್ಯಗಳು ಸಿಕ್ಕಿವೆ" ಎಂದು ಕೂಡ ಅವರು ತಿಳಿಸುತ್ತಾರೆ.
ಸಿನೆಮಾ ಮುಂದುವರೆಯುತ್ತಿರುವ ಬಗೆಗೆ ನಿರ್ಮಾಪಕ, ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ಸಂತಸವಾಗಿದ್ದಾರೆ ಎನ್ನುವ ತಂಡದ ಸದಸ್ಯ "ಪ್ರತಿದಿನ ಕಳೆದಂತೆ ನಿರ್ದೇಶಕ ಮತ್ತು ನಿರ್ಮಾಪಕರ ಮಹತ್ವಾಕಾಂಕ್ಷೆ ಹೆಚ್ಚುತ್ತಿದೆ. ಇನ್ನು ಇಲ್ಲಿ ೧೦ ದಿನದ ಚಿತ್ರೀಕರಣ ಬಾಕಿಯುಳಿದಿದ್ದು, ತಂಡ ಮುಂದಿನ ಹಂತದ ಚಿತ್ರೀಕರಣಕ್ಕೆ ನಗರಕ್ಕೆ ಹಿಂದಿರುಗಲಿದೆ. ಆಗ ನಾಯಕ ನಟಿ ಶ್ರೀನಿಧಿ ಶೆಟ್ಟಿ ಸೆಟ್ ಸೇರಲಿದ್ದಾರೆ" ಎನ್ನುತ್ತಾರೆ.