ರಿಲಯನ್ಸ್ ಜಿಯೋ ಡಿಜಿಟಲ್ ಕ್ರಾಂತಿಯನ್ನು ತನ್ನ 4ಜಿ ಸೇವೆಯ ಮೂಲಕ ಮಾಡಿದೆ. ಈಗ ಜಿಯೋಫೈ ಮೇಲೆ ಜಿಯೋ 1000 ರೂಪಾಯಿಗಳ ಡಿಸ್ಕೌಂಟ್ಸ್ ಆಫರ್ ನೀಡಿದ್ದು, ಪ್ರಸ್ತುತ 999ಗೆ ಜಿಯೋಫೈ ದೊರೆಯಲಿದೆ. 2G ಅಥವಾ 3G ಸ್ಮಾರ್ಟ್ಫೋನ್ಗಳನ್ನು ಜಿಯೋ ಹಾಟ್ಸ್ಪಾಟ್ಗೆ ಸಂಪರ್ಕವನ್ನು ಪಡೆದುಕೊಂಡು ಕರೆಮಾಡುವುದಾಗಿದೆ. 150Mbps ವೇಗದಲ್ಲಿ ಡೇಟಾ ಬಳಕೆ ಮತ್ತು 50Mbps ವೇಗದಲ್ಲಿ ಡೇಟಾ ಅಪ್ಲೋಡ್ ಸಮರ್ಥಿಸುವ ಹಾಗೂ ಒಮ್ಮೆಲೇ 32 ಸಾಧನಗಳನ್ನು ಸಂಪರ್ಕಿಸಬಹುದಾದ ಜಿಯೋಫೈ (JioFi) ಪಾಸ್ ವರ್ಡ್ ಬದಲಾಯಿಸುವುದು ಹೇಗೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ. 2300mAh ಬ್ಯಾಟರಿ ಶಕ್ತಿ ಹೊಂದಿರುವ ಜಿಯೋಫೈ 5 ರಿಂದ 6 ಗಂಟೆಗಳ ಬಳಕೆಯ ಸಮಯವನ್ನು ನೀಡಲಿದ್ದು, ಜಿಯೋಫೈ (JioFi) ಅನ್ನು ಬಳಸಿಕೊಂಡು ವೀಡಿಯೊ ಮತ್ತು HD ಧ್ವನಿ ಕರೆಗಳನ್ನು ಮಾಡಬಹುದಾಗಿದೆ.! 2G / 3G ಸ್ಮಾರ್ಟ್ಫೋನ್ Jio4GVoice ಅಪ್ಲಿಕೇಶನ್ ಅನ್ನು ಸಹ ಬಳಕೆಮಾಡಬಹುದಾಗಿದೆ.!!