Surprise Me!

Bigg Boss Season 05 : ಬಿಗ್ ಬಾಸ್ ಮೋಸ ಮಾಡ್ತಿದ್ದಾರ ?? ಹಾಗಿದ್ರೆ ರಿಯಾಜ್ ಹೇಳಿದ್ದೇನು ? | Filmibeat Kannada

2017-11-15 2,394 Dailymotion

'ದೊಡ್ಮನೆ'ಯೊಳಗೆ ಸೆಲೆಬ್ರಿಟಿಗಳೆಲ್ಲ ಕಾಲಿಟ್ಟ ಮೇಲೆ ಎಲ್ಲರನ್ನೂ ತಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಸುವವರು 'ಬಿಗ್ ಬಾಸ್'. 'ಬಿಗ್ ಬಾಸ್' ಪಾಲಿಗೆ ಎಲ್ಲಾ ಸ್ಪರ್ಧಿಗಳೂ ಒಂದೇ.! ಮನೆಯ ಎಲ್ಲ ಸದಸ್ಯರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವ 'ಬಿಗ್ ಬಾಸ್' ತಾರತಮ್ಯ ಮಾಡಲ್ಲ. ಹೀಗಿದ್ದರೂ, 'ಬಿಗ್ ಬಾಸ್' ಮೇಲೆ ಸ್ಪರ್ಧಿಗಳಿಗೆ ಅನುಮಾನ ಇದ್ದ ಹಾಗಿದೆ. ತಮ್ಮ ಇಚ್ಛೆಗೆ ತಕ್ಕಂತೆ ತಮಗೆ ಬೇಕಾದವರನ್ನ ರಿಯಾಝ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿರಬಹುದು ಎಂಬ ಹುಳ ಸೆಲೆಬ್ರಿಟಿ ಸ್ಪರ್ಧಿಗಳ ತಲೆಯಲ್ಲಿ ಹರಿದಾಡುತ್ತಿದೆ. ಮುಂದೆ ಓದಿರಿ.ಐದನೇ ವಾರ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಇದರ ಅನುಸಾರ, ಗಾರ್ಡನ್ ಏರಿಯಾದಲ್ಲಿ ಹಾಕಲಾಗಿದ್ದ ವೃತ್ತಾಕಾರದ ಗುರುತಿನ ಮೇಲೆ ಕುಳಿತುಕೊಂಡು, ಪ್ರತಿ ಬಾರಿ ಹಾಡು ಆರಂಭವಾದ ಕೂಡಲೆ ನೀಡಲಾಗಿರುವ ಪುಟ್ಟ ಪೆಟ್ಟಿಗೆಯನ್ನು ಸದಸ್ಯರು ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಬೇಕಿತ್ತು. ಹಾಡು ನಿಂತ ತಕ್ಷಣ ಹಸ್ತಾಂತರ ಮಾಡುವುದನ್ನು ನಿಲ್ಲಿಸಬೇಕಿತ್ತು. ಹಾಡು ನಿಂತ ತಕ್ಷಣ, ಪೆಟ್ಟಿಗೆ ಯಾವ ಸದಸ್ಯರ ಕೈಯಲ್ಲಿ ಇರುತ್ತದೆಯೋ, ಆ ಸದಸ್ಯರು ಈ ಚಟುವಟಿಕೆಯಿಂದ ಹೊರಬರಬೇಕಿತ್ತು. ಕೊನೆಯವರೆಗೂ ಆಟದಲ್ಲಿ ಉಳಿದುಕೊಳ್ಳುವವರು ವಿಜೇತರಾಗುತ್ತಿದ್ದರು.ವಿಶೇಷ ಚಟುವಟಿಕೆ ಏನೋ ಚೆನ್ನಾಗಿದೆ. ಆದ್ರೆ, ಹಾಡನ್ನ ಪ್ಲೇ ಮಾಡಿ, ಪಾಸ್ (Pause) ಮಾಡುವವರು ಯಾರು.? ಹಾಡನ್ನ 'ಬಿಗ್ ಬಾಸ್' ಹಾಕುತ್ತಾರೆ ನಿಜ. ಆದ್ರೆ, ಪ್ಲೇ ಮತ್ತು ಪಾಸ್ ನ 'ಬಿಗ್ ಬಾಸ್' ಮಾಡಿದರೆ, ಅದು ಪಕ್ಷಪಾತ ಆದಂತೆ. ಯಾಕಂದ್ರೆ, ಕ್ಯಾಮರಾ ಕಣ್ಣುಗಳಿಂದ ಯಾರ ಕೈಯಲ್ಲಿ ಪೆಟ್ಟಿಗೆ ಇದೆ ಎಂದು 'ಬಿಗ್ ಬಾಸ್'ಗೆ ಕಾಣ್ತಿರುತ್ತೆ. ಹೀಗಾಗಿ, ಪ್ಲೇ ಮತ್ತು ಪಾಸ್ ನ 'ಬಿಗ್ ಬಾಸ್' ಮಾಡಲಿಲ್ಲ. ಬದಲಾಗಿ ಆ ಜವಾಬ್ದಾರಿಯನ್ನ ರಿಯಾಝ್ ಗೆ ವಹಿಸಿದರು