ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ 2019ರ ಏರ್ ಶೋ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿ ಅವಘಡದಲ್ಲಿ 25 ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ಏರ್ ಶೋ ವೇಳೆ ಫೈರ್ ಶೋ: ಪಾರ್ಕಿಂಗ್‌ನಲ್ಲಿದ್ದ 25 ಕಾರುಗಳು ಬೆಂಕಿಗಾಹುತಿ..! ಈ ಬಾರಿ ಏರ್ ಶೋ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದರೂ ಕೂಡಾ ಕೆಲವು ಅಹಿತಕರ ಘಟನೆಗಳು ಏರ್ ಶೋ ಪ್ರದರ್ಶನಕ್ಕೆ ಬರುವ ವೀಕ್ಷಕರಲ್ಲಿ ಭಯ ಹುಟ್ಟಿಸುವಂತ ವಾತಾವರಣ ನಿರ್ಮಾಣವಾಗಿರುವುದು ಸುಳ್ಳಲ್ಲ. ಯಾಕೆಂದ್ರೆ ಏರ್ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಎರಡು ಹೆಲಿಕ್ಯಾಪ್ಟರ್ ಮಧ್ಯೆ ಡಿಕ್ಕಿಯಾಗಿ ಓರ್ವ ವಿಂಗ್ ಕಮಾಂಡರ್ ಬಲಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ.
Read more at: https://kannada.drivespark.com/off-beat/bangalore-cars-gutted-the-fire-parking-lot/articlecontent-pf101858-014566.html
#AeroIndia2019 #BangaloreAirShowFire #BangaloreAirShowAccident #AeroIndia2019Fire