Surprise Me!

ಬೆಂಗಳೂರು ಸಮೀಪವೇ ಟೈಗರ್, ಲಯನ್ ಸಫಾರಿ

2019-09-20 19 Dailymotion

ಕುಟುಂಬ ಸಮೇತ ಕಾಲ ಕಳೆಯಬಹುದಾದ ಬೆಂಗಳೂರಿಗೆ ಹತ್ತಿರದ ಪ್ರವಾಸಿ ತಾಣ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್. ಟೈಗರ್ ಮತ್ತು ಲಯನ್ ಸಫಾರಿ ಸಹ ಇಲ್ಲಿದ್ದು, ನಿಗದಿತ ಹಣ ಕೊಟ್ಟು ಟಿಕೆಟ್ ಖರೀದಿಸಿದವರನ್ನ ಸುರಕ್ಷಿತ ಬಸ್ಸುಗಳಲ್ಲಿ ಕಾಡುಗಳ ಒಳಗೆ ಕರೆದೊಯ್ದು ಕಾಡು ಮೃಗಗಳ ದರ್ಶನ ಮಾಡಿಸಲಾಗುತ್ತೆ. ಬಸ್ಸಿನ ಸಮೀಪವೇ ಓಡಾಡುವ ಹುಲಿ, ಸಿಂಹ, ಆನೆ, ಕರಡಿಗಳನ್ನ ಕಂಡು ಅಬಾಲ ವೃದ್ಧರಾದಿಯಾಗಿ ಎಲ್ಲರೂ ರೋಮಾಂಚನಗೊಳ್ಳುತ್ತಾರೆ. ಅಪಾರ ಪ್ರಮಾಣದ ಜಿಂಕೆಗಳು, ಕಡವೆ ಪಕ್ಷಿಗಳನ್ನ ನೋಡಬಹುದಾಗಿದೆ.