Surprise Me!

ದೆಹಲಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿವೆ 200ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳು

2020-09-22 3 Dailymotion

ದೆಹಲಿಯಲ್ಲಿ ಸದ್ಯದಲ್ಲೇ 200ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಿಗೆ ಸ್ಥಳಗಳನ್ನು ಗುರುತಿಸಲು ನಿರತವಾಗಿವೆ ಎಂದು ಹೇಳಲಾಗಿದೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್, ನವದೆಹಲಿ ಮುನ್ಸಿಪಲ್ ಕೌನ್ಸಿಲ್, ದೆಹಲಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ, ದೆಹಲಿ ಸಾರಿಗೆ ನಿಗಮ, ಡಿಎಸ್‌ಐಐಡಿಸಿ ಹಾಗೂ ಇತರ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಸಂಭವನೀಯ ಸ್ಥಳಗಳಿಗಾಗಿ ಹುಡುಕಾಟ ನಡೆಸುತ್ತಿವೆ.

ದೇಹಲಿಯ ಸರ್ಕಾರಿ ಸಂಸ್ಥೆಗಳು ಕಳೆದ ತಿಂಗಳು ಹೊಸ ಎಲೆಕ್ಟ್ರಿಕ್ ವಾಹನ 2020 ಅನ್ನು ಜಾರಿಗೆ ತಂದಿವೆ. ಈ ಹೊಸ ನೀತಿಯನ್ವಯ ದೇಶಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ವೇಗವಾಗಿ ಜಾರಿಗೆ ತರಲು ವಿಶೇಷ ಒತ್ತು ನೀಡಲಾಗಿದೆ.