Surprise Me!

ತುಮಕೂರು: ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

2025-04-15 17 Dailymotion

ತುಮಕೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಟ್ರಕ್ ಮಾಲೀಕರ ಸಂಘದ ವತಿಯಿಂದ ಕರೆ ನೀಡಲಾಗಿರುವ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತುಮಕೂರು ಲಾಲಿ ಮಾಲೀಕರ ಸಂಘದ ಅಧ್ಯಕ್ಷ ಮುಜಾಮಿಲ್ ಪಾಷಾ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೆದ್ದಾರಿಗಳಲ್ಲಿ ಸಾಗುತ್ತಿದ್ದ ಲಾರಿಗಳನ್ನು ಸಂಘದ ಸದಸ್ಯರು ಅಡ್ಡಗಟ್ಟಿದರು. ಅಲ್ಲದೇ, ಬಂದ್​ಗೆ ಬೆಂಬಲ ನೀಡುವಂತೆ ಲಾರಿ ಮಾಲೀಕರಲ್ಲಿ ಹಾಗೂ ಚಾಲಕರಲ್ಲಿ ಮನವಿ ಮಾಡಿದರು. 

ಈ ಬಗ್ಗೆ ಲಾರಿ ಮಾಲೀಕ ಮಾತನಾಡಿ, 'ರಾಜ್ಯ ಸರ್ಕಾರ ಸುಮಾರು ಐದು ತಿಂಗಳಿನಿಂದ ಡೀಸೆಲ್ ಬೆಲೆ 5 ರೂ ಏರಿಕೆ ಮಾಡಿದೆ. ಇದರಿಂದಾಗಿ ಲಾರಿ ಮಾಲೀಕರಿಗೆ ಹೊಡೆತ ಬೀಳುತ್ತಿದೆ. ಸ್ಪೇರ್ ಪಾರ್ಟ್ಸ್ ಬೆಲೆ ಜಾಸ್ತಿಯಾಗುತ್ತಿದೆ. ಬಾರ್ಡರ್​ನಲ್ಲಿ ಆರ್​ಟಿಓ ಚೆಕ್​​ಪೋಸ್ಟ್​ ತೆಗೆಯಬೇಕು. ಜಿಎಸ್ಟಿ ಬಂದ ಮೇಲೆ ಎಲ್ಲವೂ ಆನ್​ಲೈನ್ ಆಗಿದೆ. ಹೀಗಾಗಿ, ನಮಗೆ ಚೆಕ್​ಪೋಸ್ಟ್ ಬೇಕಾಗಿಲ್ಲ. ನಾವು ರೋಡ್ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮಗೆ ಟೋಲ್ ಏಕೆ ಬೇಕು?. ಅದನ್ನೂ ಕೂಡಾ ತೆರವುಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ' ಎಂದರು.

ಇದನ್ನೂ ಓದಿ : ಲಾರಿ ಮುಷ್ಕರದಿಂದ ದಿಂಬಂ ರಸ್ತೆ ಖಾಲಿ ಖಾಲಿ: ಬಲವಂತದ ಬಂದ್​ಗೆ ಪೊಲೀಸರ ಎಚ್ಚರಿಕೆ - LORRY STRIKE