Surprise Me!

ಆಹಾರ ಅರಸಿ ಬಂದಾಗ ಬೇರ್ಪಟ್ಟ ಮರಿ ಆನೆ: ಮರಳಿ ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

2025-06-14 395 Dailymotion

ಮೈಸೂರು: ತಾಯಿಯಿಂದ ಬೇರ್ಪಟ್ಟ ಮರಿ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ, ಮತ್ತೆ ತಾಯಿ ಆನೆಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ವರ್ತಿ ಹಾಡಿಯಲ್ಲಿ ಆಹಾರ ಅರಸಿ ಬಂದ ಆನೆಗಳ ಹಿಂಡಿನಿಂದ ಮರಿಯಾನೆ ಬೇರ್ಪಟ್ಟಿತ್ತು. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಒಂಟಿಯಾದ ಮರಿ ಹಾಡಿಯಲ್ಲಿ ಓಡಾಡುತ್ತಿತ್ತು.

ಇದನ್ನು ನೋಡಿದ ಹಾಡಿ ನಿವಾಸಿಗಳು, ಮರಿ ಆನೆ ಇರುವುದನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಮರಿ ಆನೆಯನ್ನು ಕಾಡಂಚಿನ ಪ್ರದೇಶದಲ್ಲಿ ಕರೆದೊಯ್ದು, ಜೋಪಾನವಾಗಿ ತಾಯಿ ಆನೆಯನ್ನು ಸೇರುವಂತೆ ಮಾಡಿದ್ದಾರೆ. 

ಇದನ್ನೂ ಓದಿ: ಕಾಡಂಚಿನ ಗ್ರಾಮದಲ್ಲಿ ಆನೆ ಮರಿ ನಾಮಕರಣ ಸಂಭ್ರಮ; ಬುದ್ಧಾದಿತ್ಯ ಎಂದು ಹೆಸರಿಟ್ಟು ಸಂಭ್ರಮಿಸಿದ ಜನ

ಇದನ್ನೂ ಓದಿ: ಆನೆ ಮತ್ತು ಮಾನವ ಸಂಘರ್ಷ ತಪ್ಪಿಸಲು ಜೇನು ಕೃಷಿ ಪ್ರಯೋಗ: ಹನಿ ಫೆನ್ಸಿಂಗ್​ ಉಪಯೋಗವೇನು?

ಇದನ್ನೂ ಓದಿ: ಕಾಡಾನೆಗಳ ನಿಯಂತ್ರಣಕ್ಕೆ ಬಳಸುವ ಕುಮ್ಕಿ ಆನೆಗಳ ವಿಶೇಷತೆ ಏನು: ಇವುಗಳಿಗೆ ತರಬೇತಿ ಹೇಗಿರುತ್ತೆ ಗೊತ್ತಾ?