Surprise Me!

ಹಾಸನದಲ್ಲಿ ನಿದ್ದೆಗೆಡಿಸಿದ್ದ ಒಂಟಿ ಚಿರತೆ ಸೆರೆ; ದುಗುಡ ಕೊಂಚ ಕಡಿಮೆ

2025-07-12 20 Dailymotion

ಹಾಸನ: ಜಿಲ್ಲೆಯ ಹೊಳೆನರಸೀಪುರದ ಸಿಗರಹಹಳ್ಳಿಯಲ್ಲಿ ಹಲವು ದಿನಗಳಿಂದ ಸ್ಥಳೀಯರ ನಿದ್ದೆಗೆಡಿಸಿದ್ದ ಒಂಟಿ ಚಿರತೆ ಕೊನೆಗೂ ಸೆರೆಯಾಗಿದೆ. 4-5 ವರ್ಷದ ಚಿರತೆ ಇದಾಗಿದ್ದು, ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರಲ್ಲಿ ಕೊಂಚ ನಿರಾಳತೆ ಮೂಡಿದೆ.

ಕಳೆದ 15 ದಿನಗಳ ಅಂತರದಲ್ಲಿ 5-6 ಕುರಿಗಳು ಮತ್ತು ಮೇಕೆಗಳನ್ನು ತಿಂದು ಮುಗಿಸಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು, ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಆಕ್ರೋಶ ಬೆನ್ನಲ್ಲೇ ಶುಕ್ರವಾರ ಸಂಜೆ ಅರಣ್ಯಾಧಿಕಾರಿಗಳು ಗ್ರಾಮದ ಆರ್ದುರೇಗೌಡ ಎಂಬುವರ ಜಮೀನಿನಲ್ಲಿ ಬೋನು ಇಟ್ಟಿದ್ದರು. ಮಧ್ಯರಾತ್ರಿ ಮೇಕೆಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ. 

ಶಿಗರನಹಳ್ಳಿಯ ಸುತ್ತಮತ್ತ ಹರದಹಳ್ಳಿ ಬೆಟ್ಟ, ದೊಡ್ಡ ಬೆಟ್ಟ, ಕಾರೆಹಳ್ಳ ಬೆಟ್ಟ, ಸಾತೇನಹಳ್ಳಿ ಬೆಟ್ಟ ಹೀಗೆ.. ಮೂರ್ನಾಲ್ಕು ಬೆಟ್ಟಗಳಿವೆ. ಈ ಬೆಟ್ಟಗಳ ಸುತ್ತಲೂ ಚಿರತೆಗಳ ವಾಸಸ್ಥಾನವಾಗಿದೆ. 10-15ಕ್ಕೂ ಹೆಚ್ಚು ಚಿರತೆಗಳಿವೆ ಎಂಬ ಅನುಮಾನ ಇದೆ. ಗ್ರಾಮದ ಅಕ್ಕಪಕ್ಕದಲ್ಲಿ ಓಡಾಟ ನಡೆಸುತ್ತಿದ್ದು, ಜಾನುವಾರು ಮೇಯಿಸಲು ಹೋದ ಗ್ರಾಮಸ್ಥರುಗಳ ಕಣ್ಣಿಗೆ ಕಾಣಿಸಿಕೊಂಡಿವೆ. ಬೆಟ್ಟದ ಗುತ್ತಿಗಳಲ್ಲಿ ಸಂತಾನೋಪ್ಪತಿ ಮಾಡಿದ್ದು, ಮೊನ್ನೆ ಜೋಳದ ಹೊಲದಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿದ್ದನ್ನು ಗಮನಿಸಿದ್ದಾರೆ. ಸದ್ಯ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದ್ದರಿಂದ ನಮ್ಮ ದುಗುಡ ಕೊಂಚ ಕಡಿಮೆಯಾಗಿದೆ. ಉಳಿದ ಚಿರತೆಗಳನ್ನು ಸೆರೆ ಹಿಡಿದು, ಕಾಡಿಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೈತನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಹಿಡಿದ ಗ್ರಾಮಸ್ಥರು - VILLAGERS CAPTURED LEOPARD