ಚಿಕ್ಕಮಗಳೂರು : ರಾಜ್ಯದಲ್ಲಿಯೇ ಅತ್ಯಂತ ಎತ್ತರದ ಗಿರಿ ಪ್ರದೇಶ ಎಂದು ಪ್ರಸಿದ್ಧಿಯಾಗಿರುವ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನ ಗಿರಿ ಪ್ರದೇಶಕ್ಕೆ ಕಳೆದ ಮೂರು ದಿನಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ನಿರೀಕ್ಷೆಗೂ ಮೀರಿ ಜಿಲ್ಲೆಯ ಪ್ರವಾಸಿ ಸ್ಥಳದಲ್ಲಿ ಜನಜಾತ್ರೆ ನಡೆಯುತ್ತಿದೆ. ಹೀಗಾಗಿ, ಬೆಳಗ್ಗೆಯಿಂದಲೂ ಗಿರಿ ಸಾಲಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹೊನ್ನಮ್ಮನಹಳ್ಳ, ಮುಳ್ಳಯ್ಯನಗಿರಿ ಕ್ರಾಸ್, ಸೇರಿದಂತೆ ಗಿರಿ ಸಾಲಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. 1460 ಕಾರು, 640 ಬೈಕ್, 189 ಟಿಟಿ, 7 ಮಿನಿ ಬಸ್ನಲ್ಲಿ ಪ್ರವಾಸಿಗರು ಈ ಭಾಗಕ್ಕೆ ಆಗಮಿಸಿದ್ದಾರೆ.
ದಾಖಲೆ ಪ್ರಮಾಣದಲ್ಲಿ ಒಂದೇ ದಿನ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಆಗಮಿಸಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸೇರಿದಂತೆ ಬೇರೆ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ದೇಶ ಹಾಗೂ ರಾಜ್ಯದ ಮೂಲೆ ಮೂಲೆಯಿಂದಲೂ ಪ್ರವಾಸಿಗರು ಈ ಭಾಗಕ್ಕೆ ಆಗಮಿಸಿ, ಪ್ರಕೃತಿಯ ಜೊತೆ ಬೆರೆತು ತಮ್ಮ ಅದ್ಭುತ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ : ಪ್ರವಾಸಿಗರೇ ಗಮನಿಸಿ: ಎತ್ತಿನಭುಜ ಚಾರಣಕ್ಕೆ ತಾತ್ಕಾಲಿಕ ನಿಷೇಧ - ETHINA BHUJA TREKING TEMPORARY BAN