Surprise Me!

ಮಂಗಳೂರಿನಲ್ಲಿ ಗುಡ್ಡ ಕುಸಿತ: ಮೇರಿಹಿಲ್‌ನಲ್ಲಿ ಕಾಂಪೌಂಡ್ ಕುಸಿದು ಹಲವು ದ್ವಿಚಕ್ರ ವಾಹನಗಳು ಜಖಂ

2025-07-17 10 Dailymotion

ಮಂಗಳೂರು: ಕರಾವಳಿಯಲ್ಲಿ ಭಾರಿ ಮಳೆಯಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ನಾಶ-ನಷ್ಟ ಉಂಟಾಗಿದೆ. 

ನಗರದ ಬಿಜೈ-ಕೆಪಿಟಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಕಂಡರೆ, ಮೇರಿಹಿಲ್‌ನಲ್ಲಿ ಕಾಂಪೌಂಡ್ ಕುಸಿದು ಹಲವು ದ್ವಿಚಕ್ರ ವಾಹನಗಳು ಹಾನೀಗೀಡಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಕಲ್ಲು ಮತ್ತು ಮಣ್ಣು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದರಿಂದ ಜಖಂಗೊಂಡಿವೆ.

ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆಂಪು ಕಲ್ಲು ಗುಡ್ಡ ಭಾರಿ ಪ್ರಮಾಣದಲ್ಲಿ ಕುಸಿದು ರಸ್ತೆಗೆ ಬಿದ್ದಿದೆ. ಆದರೆ, ರಾತ್ರಿ ವೇಳೆ ಘಟನೆ ನಡೆದಿದ್ದು ವಾಹನ ಸಂಚಾರವಿಲ್ಲದ ಪರಿಣಾಮ ದೊಡ್ಡ ದುರಂತ ತಪ್ಪಿದಂತಾಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ವಾಹನಗಳನ್ನು ಏಕಮುಖ ಸಂಚಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನ ಹಿಂಭಾಗದ ಕಾಂಪೌಂಡ್ ಕುಸಿದ ಪರಿಣಾಮ ಗೋಡೆಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಹಾಗೂ ಇನ್ನೋವಾ ಕಾರು ಜಖಂಗೊಂಡಿದೆ. 

ಬುಧವಾರ ರಾತ್ರಿ 11.16ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಈ ವಾಹನಗಳೆಲ್ಲವೂ ಗ್ಯಾರೇಜ್‌ಗೆ ಬಂದಿರುವ ವಾಹನಗಳು ಎಂದು ತಿಳಿದು ಬಂದಿದೆ. ಕಾಂಪೌಂಡ್ ಕುಸಿತದಿಂದ ಸುಮಾರು 17 ದ್ವಿಚಕ್ರ ವಾಹನಗಳು ಮತ್ತು ಒಂದು ಇನ್ನೋವಾ ಕಾರಿಗೆ ಹಾನಿಗೊಳಗಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ: ಹಲವೆಡೆ ಜಲಾವೃತ, ಗುಡ್ಡ ಕುಸಿತದಿಂದ ರಸ್ತೆ ಸಂಚಾರ ಅಸ್ತವ್ಯಸ್ತ - HEAVY RAIN