Surprise Me!

ಒಂದೇ ತಿಂಗಳಲ್ಲಿ ಕೋಟ್ಯಾಧೀಶನಾದ ನಂಜುಂಡೇಶ್ವರ: ₹1.80 ಕೋಟಿ ಕಾಣಿಕೆ ಸಂಗ್ರಹ

2025-07-19 23 Dailymotion

ಮೈಸೂರು: ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯು ಒಂದೇ ತಿಂಗಳಿನಲ್ಲಿ ಕೋಟ್ಯಾಧೀಶನಾಗಿದ್ದು, ದೇವಾಲಯದ ಹುಂಡಿಯಲ್ಲಿ 1.80 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗಿದೆ.

ದೇವಸ್ಥಾನದ ದಾಸೋಹ ಭವನದಲ್ಲಿ 24 ಹುಂಡಿಗಳನ್ನು ದೇವಸ್ಥಾನ ಹಾಗೂ ಬ್ಯಾಂಕಿನ ಸಿಬ್ಬಂದಿ ಎಣಿಕೆ ಮಾಡಿದರು. ಈ ವೇಳೆ, 74.500 ಮಿಲಿಗ್ರಾಂ ಚಿನ್ನ, 1 ಕೆಜಿ 780 ಗ್ರಾಂ ಬೆಳ್ಳಿ ಹಾಗೂ 1,80,67,108 ರೂ. ನಗದು ಹಣ ಸಂಗ್ರಹವಾಗಿದೆ. ಅಲ್ಲದೆ, 78 ವಿದೇಶಿ ಕರೆನ್ಸಿಗಳು ಸಿಕ್ಕಿವೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ನಂಜುಂಡೇಶ್ವರನ ಹುಂಡಿಗಳಲ್ಲಿ ಕಾಣಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಉಚಿತ ಬಸ್ ಸಂಚಾರ ವ್ಯವಸ್ಥೆಯಿಂದ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ನಾನಾ ಕಡೆಗಳಿಂದ ದೇಗುಲಕ್ಕೆ ಆಗಮಿಸುತ್ತಿದ್ದಾರೆ.

ಕಳೆದ ವರ್ಷವೂ ಒಂದು ತಿಂಗಳಿನಲ್ಲಿ 1.12 ಕೋಟಿ ರೂ. ಹಣ ಸಂಗ್ರಹವಾಗಿತ್ತು. ಒಂದು ತಿಂಗಳ ಅವಧಿಯ ಬಳಿಕ 35 ಹುಂಡಿಗಳ ಎಣಿಕೆ ಮಾಡಿದಾಗ 1,12,92,056 ರೂ. ಸಂಗ್ರಹವಾಗಿತ್ತು. ಆಗ ಕೂಡ 51 ಗ್ರಾಂ ಚಿನ್ನ, 1 ಕೆ.ಜಿ 800 ಗ್ರಾಂ ಬೆಳ್ಳಿ ಹಾಗೂ 46 ವಿದೇಶಿ ನೋಟುಗಳು ನಂಜುಂಡೇಶ್ವರನಿಗೆ ಕಾಣಿಕೆಯಾಗಿ ಬಂದಿತ್ತು. 

ಇದನ್ನೂ ಓದಿ: ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ: ₹1 ಕೋಟಿ‌ ಮೌಲ್ಯದ ಕಾಣಿಕೆ ಸಂಗ್ರಹ