ಶಿವಮೊಗ್ಗ: ಮಲೆನಾಡಿನ ಶಕ್ತಿದೇವತೆ ಸಿಗಂದೂರಿನ ಚೌಡೇಶ್ವರಿ ದೇವಿಗೆ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ದ್ವೀಪದಲ್ಲಿನ ಸಿಗಂದೂರು ಗ್ರಾಮದ ಶ್ರೀ ಚೌಡೇಶ್ವರಿ ದೇವಿಗೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನ ಸೇರಿದಂತೆ ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಅದರಂತೆ ಗುರುವಾರ (ಜು.24) ಭೀಮನ ಅಮಾವಾಸ್ಯೆಯ ಪ್ರಯುಕ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಂಜಾನೆಯಿಂದಲೇ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಮಂಗಳಾರತಿಯನ್ನೂ ನಡೆಸಲಾಯಿತು.
ದೇವಾಲಯಕ್ಕೆ ವಿಶೇಷ ಅಲಂಕಾರ : ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಿಯ ಜೊತೆಗೆ ದೇವಾಲಯಕ್ಕೂ ಸಹ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ದೇವಿಯ ಕಣ್ಣಿನ ಅಲಂಕಾರ ಗಮನ ಸೆಳೆಯಿತು. ದೇವಾಲಯದ ಒಳಗೆ ವಿವಿಧ ಹೂವುಗಳಿಂದ ಮೇಲ್ಭಾಗವನ್ನು ಅಲಂಕಾರ ಮಾಡಲಾಗಿತ್ತು. ಜೊತೆಗೆ ಬಣ್ಣ ಬಣ್ಣದ ಲೈಟಿಂಗ್ಸ್ಗಳು ದೇವಾಲಯಕ್ಕೆ ಮೆರುಗು ನೀಡಿದವು.
ಅಮಾವಾಸ್ಯೆಯ ಪ್ರಯುಕ್ತ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಭಕ್ತರು ಚೌಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ದೇವಾಲಯದ ಸಮಿತಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣ ಮಾಡಿದ್ದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಇದನ್ನೂ ಓದಿ : ಶ್ರೀ ಬಸವಪ್ಪ ಚಾಮುಂಡೇಶ್ವರಿ ಪುಣ್ಯಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆದ ಭೀಮನ ಅಮಾವಾಸ್ಯೆ - BHEEMANA AMAVASYA