ಧರ್ಮಸ್ಥಳದಲ್ಲಿ ನಿಗೂಢ ಕೊಲೆಗಳ ರಹಸ್ಯ ಭೇದಿಸಲು ಎಸ್ಐಟಿ ತೀವ್ರ ತಲಾಶ್ ನಡೆಸ್ತಿದೆ. ನೇತ್ರಾವತಿ ತಟದ ದಡದಲ್ಲಿ ದೂರುದಾರ ತೋರಿಸಿದ ಸ್ಥಳಗಳಲ್ಲಿ ಸಮಾಧಿಗಳನ್ನ ಅಗೆಯಲಾಗ್ತಿದೆ. ಈವರೆಗೂ ಕೂಡ ಅಗೆದ ಸ್ಥಳಗಳಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಒಂದು ವೇಳೆ ಸಮಾಧಿ ಅಗೆದಾಗ ಕಳೇಬರ ಪತ್ತೆಯಾದ್ರೆ, ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತೆ.