ಅದೊಂದು ಪವಿತ್ರ ಧಾರ್ಮಿಕ ಸ್ಥಳ.. ಲಕ್ಷಾಂತರ ಮಂದಿ ಅಲ್ಲಿ ನೆಲಸಿರೋ ದೇವರನ್ನ ನಂಬುತ್ತಾರೆ.. ಹರಕೆಗಳನ್ನ ಕಟ್ಟಿಕೊಂಡು ಪಾದಯಾತ್ರೆ ಮಾಡಿಕೊಂಡು ಅಲ್ಲಿಗೆ ಹೋಗುತ್ತಾರೆ.. ಓಂ ನಮಃ ಶಿವಾಯ ಅನ್ನೋ ಘೋಷಣೆಯೊಂದೇ ಅಲ್ಲಿ ಕೇಳಿಸುತ್ತಿತ್ತು.. ಆದ್ರೆ ಇವತ್ತು ಅದೇ ಪವಿತ್ರ ಸ್ಥಳದಲ್ಲಿ ಪೊಲೀಸರ ಬೂಟಿನ ಸದ್ದು.. ಹಾರೆ ಗುದ್ದಲಿ.. ಪಿಕಾಸಿಗಳ ಸದ್ದು ಜೋರಾಗಿದೆ.. ಯಾರೋ ಅನಾಮಿಕ ಕೊಟ್ಟ ಒಂದು ಸುಳಿವು ಇವತ್ತು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.