13 ದಿನಗಳು.. 16 ಪಾಯಿಂಟ್ಗಳು.. 20 ಗುಂಡಿಗಳು.. ಇದು SIT ತನಿಖೆಯ ಒನ್ ಲೈನ್ ಸ್ಟೋರಿ... ಆವತ್ತು ಜುಲೈ 11ನೇ ತಾರೀಖು.. ಮುಖ ಮೂತಿಯಲ್ಲ ಮುಚ್ಚಿಕೊಂಡು ಬಂದಿದ್ದ ಅನಾಮಿಕನೊಬ್ಬ ನಾನಗೆ ಎಲ್ಲಾ ಗೊತ್ತು ಅಂದಿದ್ದ.. ಅವನ ಮಾತನ್ನ ನಂಬಿ ಸರ್ಕಾರ SIT ರಚಿಸಿತ್ತು.. ಬಟ್ ಗುಂಡಿಗಳ ಮೇಲೆ ಗುಂಡಿ ಅಗೆದರೂ ಕಳೆಬರ ಇರಲಿ ಒಂದು ಉಗುರು ಸಹ ಸಿಕ್ಕಿಲ್ಲ.