ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ‘ವೋಟ್ ಚೋರಿ’ ಅಭಿಯಾನ ನಡೆಸುತ್ತಿದ್ದಾರೆ. ಈ ‘ವೋಟ್ ಚೋರಿ’ ಅಭಿಯಾನಕ್ಕೆ ಮೂಲ ಕಾರಣವಾಗಿದ್ದೇ ಈ CSDS ಸೆಫಾಲಜಿಸ್ಟ್ ಸಂಜಯ್ ಕುಮಾರ್.. ಯಾಕಂದ್ರೆ ಮಹಾರಾಷ್ಟ್ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಸೇರ್ಪಡೆ ಮತ್ತು ಡಿಲೀಟ್ ಬಗ್ಗೆ CSDS ಸೆಫಾಲಜಿಸ್ಟ್ ಸಂಜಯ್ ಕುಮಾರ್ ಟ್ವೀಟ್ ಮಾಡಿದ್ರು. ಇದೇ ಮಾಹಿತಿಯ ಆಧಾರದಲ್ಲಿ ರಾಹುಲ್ ಗಾಂಧಿ ಮತ ಕಳವು ಆಗಿದೆ ಎಂದು ಆರೋಪಿಸಿದ್ರು. ಆದ್ರೀಗ ತಾವು ಹಿಂದೆ ಮಾಡಿದ್ದ ಪೋಸ್ಟ್‌ಗಳನ್ನು ಸಂಜಯ್ ಕುಮಾರ್ ಡಿಲೀಟ್ ಮಾಡಿದ್ದು, ಅಲ್ಲದೇ, ಕ್ಷಮೆ ಕೋರಿದ್ದಾರೆ.